ಅಪಸ್ಮಾರಕ್ಕೆ ಕೀಟೋಜೆನಿಕ್ ಪಥ್ಯ ಮತ್ತು ಇತರ ಪಥ್ಯ ಆಹಾರದ ಚಿಕಿತ್ಸೆಗಳು

ಹಿನ್ನೆಲೆ
ಅಪಸ್ಮಾರವು ಅಸ್ವಸ್ಥತೆಯಾಗಿದ್ದು, ಇದರಲ್ಲಿ ಪುನರಾವರ್ತಿತ/ಮರುಕಳಿಸುವ ಸೆಳವುಗಳು (ಫಿಟ್ಸ್) ಮೆದುಳಿನಿಂದ ಅಸಹಜ ವಿದ್ಯುತ್ತಿನ ಹೊರಸೂಸುವಿಕೆಯಿಂದ ಉಂಟಾಗುತ್ತವೆ.ಹೆಚ್ಚಿನ ಸೆಳವುವಿಕೆಗಳನ್ನು ಒಂದು ಅಥವಾ ಹೆಚ್ಚು ಆಂಟಿಇಪಿಲೆಪ್ಟಿಕ್ (ಅಪಸ್ಮಾರ- ವಿರೋಧಿ ) ಔಷಧಿಗಳಿಂದ ನಿಯಂತ್ರಿಸಬಹುದು. ಆದರೆ ಸ್ವಲ್ಪ ಸಮಯದ ನಂತರ ಈ ಔಷಧಿಗಳಿಂದ ಸೆಳವುಗಳಿಗೆ ನೆರವಾಗುವುದಿಲ್ಲ .(ಇದನ್ನು ಔಷಧ-ನಿರೋಧಕ ಅಪಸ್ಮಾರ ಎಂದು ಕರೆಯಲಾಗುತ್ತದೆ).ಔಷಧಿ ನಿರೋಧಕ ಅಪಸ್ಮಾರ ಹೊಂದಿರುವ ಜನರಿಗೆ (ಕೀಟೋಜೆನಿಕ್ ಪಥ್ಯ ಎಂದು ಕರೆಯಲ್ಪಡುವ ) ವಿಶೇಷ ಪಥ್ಯ ಪರಿಗಣಿಸಬಹುದು.ಕೀಟೋಜೆನಿಕ್ ಪಥ್ಯಗಳಲ್ಲಿ ಹೆಚ್ಚಿನ ಕೊಬ್ಬು ಅಂಶ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ನ ಅಂಶ ಇರುತ್ತದೆ.

ಈ ವಿಮರ್ಶೆಯು ಗ್ರಹಣ ನಿಯಂತ್ರಣ, ಜ್ಞಾನಗ್ರಹಣ (ಉದಾಹರಣೆಗೆ, ಕಲಿಕೆ, ಏಕಾಗ್ರತೆ ಮತ್ತು ಮಕ್ಕಳಲ್ಲಿ ಶೈಕ್ಷಣಿಕ ಕಾರ್ಯಕ್ಷಮತೆ; ವಯಸ್ಕರಲ್ಲಿ ಕಲಿಕೆ, ಏಕಾಗ್ರತೆ ಮತ್ತು ಜ್ಞಾಪಕಶಕ್ತಿ) ಮತ್ತು ನಡವಳಿಕೆಯ ಮೇಲೆ  ಕೀಟೋಜೆನಿಕ್ ಪಥ್ಯದ ಪರಿಣಾಮವನ್ನು ಕಂಡುಹಿಡಿಯುವ ಗುರಿಯನ್ನು ಹೊಂದಿದೆ.ಈ ಪಥ್ಯದ ಅಡ್ಡಪರಿಣಾಮಗಳು, ಅಧ್ಯಯನದಿಂದ ಹೊರಬಂದ ಭಾಗವಹಿಸಿದವರ ಸಂಖ್ಯೆ ಮತ್ತು ಇದಕ್ಕೆ ಕಾರಣಗಳನ್ನೂ ನಾವು ತನಿಖೆ ಮಾಡಿದ್ದೇವೆ.

ದಿನಾಂಕ ಹುಡುಕಾಟ
ಈ ಪುರಾವೆಯು ಮಾರ್ಚ್ 2015 ಕ್ಕೆ ಪ್ರಸ್ತುತವಾಗಿದೆ.

ಅಧ್ಯಯನ ಗುಣಲಕ್ಷಣಗಳು
ಕೀಟೋಜೆನಿಕ್ ಪಥ್ಯವನ್ನು ಇತರ ಚಿಕಿತ್ಸೆಗಳೊಂದಿಗೆ ಹೋಲಿಸಲಾದ ,ವಯಸ್ಕರು ಅಥವಾ ಅಪಸ್ಮಾರ ಹೊಂದಿರುವ ಮಕ್ಕಳ  ಯಾದೃಚ್ಛಿಕ ನಿಯಂತ್ರಿತ ವೈದ್ಯಕೀಯ ಅಧ್ಯಯನ ದತ್ತ ಸಂಚಯ(ಡೇಟಾಬೇಸ್ಗ)ಳನ್ನು ನಾವು ಹುಡುಕಿದೆವು( ವೈದ್ಯಕೀಯ ಅಧ್ಯಯನಗಳಲ್ಲಿ ಜನರನ್ನು ಯಾದೃಚ್ಛಿಕವಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚು ಚಿಕಿತ್ಸಾ ಗುಂಪುಗಳಾಗಿ ಇರಿಸಲಾಗುತ್ತದೆ),ಕೀಟೋಜೆನಿಕ್ ಪಥ್ಯವನ್ನು ಇತರ ಚಿಕಿತ್ಸೆಗಳೊಂದಿಗೆ ಹೋಲಿಸಲಾದ ,ವಯಸ್ಕರು ಅಥವಾ ಅಪಸ್ಮಾರ ಹೊಂದಿರುವ ಮಕ್ಕಳ  ಯಾದೃಚ್ಛಿಕ ನಿಯಂತ್ರಿತ ವೈದ್ಯಕೀಯ ಅಧ್ಯಯನ ದತ್ತ ಸಂಚಯ(ಡೇಟಾಬೇಸ್ಗ)ಳನ್ನು ನಾವು ಹುಡುಕಿದೆವು( ವೈದ್ಯಕೀಯ ಅಧ್ಯಯನಗಳಲ್ಲಿ ಜನರನ್ನು ಯಾದೃಚ್ಛಿಕವಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚು ಚಿಕಿತ್ಸಾ ಗುಂಪುಗಳಾಗಿ ಇರಿಸಲಾಗುತ್ತದೆ),

ಪ್ರಮುಖ ಫಲಿತಾಂಶಗಳು
ಅತಿಸಾರ, ಮಲಬದ್ಧತೆ ಮತ್ತು ವಾಂತಿ ಇವು ಕೀಟೋಜೆನಿಕ್ ಪಥ್ಯಗಳ ಅಲ್ಪಾವಧಿ ಅಡ್ಡಪರಿಣಾಮಗಳೆಂದು ಕಂಡುಬಂದಿದೆ. ದೀರ್ಘಾವಧಿಯಲ್ಲಿ, ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.ಸೆಳವುವಿಕೆಗಳಲ್ಲಿನ ಸುಧಾರಣೆ ಕೊರತೆ ಮತ್ತು ಆಹಾರದ ಕಳಪೆ ಸಹಿಷ್ಣುತೆಯಿಂದ ಭಾಗವಹಿಸುವವರು ಹೊರಬಂದಿದ್ದಾರೆಂದು ಎಲ್ಲಾ ಅಧ್ಯಯನಗಳು ವರದಿ ಮಾಡಿದೆ. ಅರಿವಿನ ಮತ್ತು ನಡವಳಿಕೆಯ ಮೇಲೆ ಕೀಟೋಜೆನಿಕ್ ಪಥ್ಯಗಳ ಪರಿಣಾಮದ ಬಗ್ಗೆ ಯಾವುದೇ ಅಧ್ಯಯನಗಳು ವರದಿಯಾಗಿಲ್ಲ.ಇತ್ತೀಚೆಗೆ, ಇತರ, ಹೆಚ್ಚು ಆಹ್ಲಾದಕರವಾದ ಕೀಟೋಜೆನಿಕ್ ಪಥ್ಯಗಳ ವಿಧಗಳು, ಉದಾಹರಣೆಗೆ, ಮಾರ್ಪಡಿಸಿದ ಅಟ್ಕಿನ್ಸ್ ಕೀಟೋಜೆನಿಕ್ ಪಥ್ಯದಂತಹವುಗಳು ಹೆಚ್ಚು ನಿರ್ಬಂಧಿತ ಕೀಟೋಜೆನಿಕ್ ಪಥ್ಯಗಳಂತೆ ಸೆಳವು ನಿಯಂತ್ರಣದ ಮೇಲೆ ಅಂತಹುದೇ ಪರಿಣಾಮಗಳು  ಕಂಡುಬಂದಿದೆ.

ಆದಾಗ್ಯೂ, ಹೆಚ್ಚಿನ ಸಂಶೋಧನೆ ಅಗತ್ಯವಿದೆ.

ಪುರಾವೆಯ ಗುಣಮಟ್ಟ

ಈ ವಿಮರ್ಶೆಯಲ್ಲಿ, ಒಳಗೊಳ್ಳಲ್ಪಟ್ಟ ಅಧ್ಯಯನಗಳು ಸಣ್ಣ ಸಂಖ್ಯೆಯಲ್ಲಿ ಭಾಗವಹಿಸಿದವರಿಗೆ ಸೀಮಿತವಾಗಿದ್ದವು ಮತ್ತು ಕೇವಲ ಮಕ್ಕಳನ್ನು ಒಳಗೊಂಡಿತ್ತು; ಆದ್ದರಿಂದ, ಪುರಾವೆಯ ಗುಣಮಟ್ಟ ಕಡಿಮೆಯಾಗಿದೆ. ಪ್ರಸ್ತುತ ವಯಸ್ಕರಲ್ಲಿ ಈ ಆಹಾರಗಳ ಬಳಕೆಯ ಬಗ್ಗೆ ಸ್ಸಂಶೋಧನೆ ಕಡಿಮೆ ಪ್ರಮಾಣದಲ್ಲಿ ಇದೆ, ಆದ್ದರಿಂದ, ಈ ಅಧ್ಯಯನ  ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯವಿದೆ.

For full review visit : http://cochranelibrary-wiley.com/doi/10.1002/14651858.CD001903.pub3/full

Translated by :

Mahendri.N.V M.Sc., PGCCN .MHRM.,M.Phil., RD .,
Retd .Chief-Dietitian & Head, Dept of Dietetics, CMC,Velllore
Raghavendra Nagara,Tumkuru, Karnataka State
e-mail
nv.mahendri@yahoo.com